ದಿನಾಂಕ
21-ಫೆಬ್ರವರಿ-2020 , ಶುಕ್ರವಾರ
21-ಫೆಬ್ರವರಿ-2020 , ಶುಕ್ರವಾರ
ಸಂಜೆ 05:00 ಗಂಟೆಗೆ
ವೀರ ರಾಣಿ ಕಿತ್ತೂರು ಚೆನ್ನಮ್ಮ ಕ್ರೀಡಾಂಗಣ, ಶ್ರೀ ಬಲಮುರಿ ವರಸಿದ್ಧಿ ವಿನಾಯಕ ಟ್ರಸ್ಟ್ (ರಿ), ನಂದಿನಿ ಲೇಔಟ್, ಬೆಂಗಳೂರು - 560096
ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರವು ಒಂದು ಆಧ್ಯಾತ್ಮಿಕ ಮತ್ತು ಸಮಾಜ ಸೇವಾ ಕೇಂದ್ರ, ಈ ಸಂಸ್ಥೆಯ ವತಿಯಿಂದ ಭಾರತ ದೇಶದಲ್ಲಿ ಪ್ರಪ್ರಥಮ ಬಾರಿಗೆ 1,008 ಜ್ಯೋತಿರ್ಲಿಂಗವನ್ನು ಶಾಸ್ತ್ರೋಕ್ತವಾಗಿ 1,008 ಭಕ್ತರಿಂದ ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಪೂಜೆ ಮಾಡಿಸಲಾಗುವುದು.
ಎಸ್.ಎಸ್.ಬಿ.ಕೆ ಸ್ಥಾಪಕ ಮತ್ತು ಅಧ್ಯಕ್ಷರು
ಮುದ್ರಾ ರತ್ನ, ಮುದ್ರಾ ಬ್ರಹ್ಮ, ಮುದ್ರಾ ಶಿರೋಮಣಿ ಎಂಬ ಅಭಿದಾನಗಳಿಂದ ಕರೆಸಿಕೊಳ್ಳುವ ಡಾ. ಶ್ರೀ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ರವರು ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರದ (ಎಸ್.ಎಸ್.ಬಿ.ಕೆ.) ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ.
ಶ್ರೀ ಗುರುಗಳು ತಮ್ಮ 13 ನೇ ವಯಸ್ಸಿನಿಂದ ದತ್ತ ಸಂಪ್ರದಾಯವನ್ನು ಶ್ರೀ ನಿರಂಜನಾನಂದ ಸರಸ್ವತೀ ಮಹಾರಾಜ್ ಮತ್ತು ಶ್ರೀ ಭಾಗೀರಥಿ ವಿಷ್ಣು ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಅನುಸರಿಸುತ್ತಿರುವ ಆಧ್ಯಾತ್ಮಿಕ ಗುರುಗಳು ಮತ್ತು ಮಲ್ಲಾಡಿ ಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿ (ತಿರುಕ) ರವರಿಂದ ಯೋಗಾಭ್ಯಸವನ್ನು ಕಲಿತಿದ್ದಾರೆ.
ಆರಂಭಿಕ ದಿನಗಳಲ್ಲಿ ಶ್ರೀ ಗುರುಗಳು ಭಾರತ್ ವಿಕಾಸ್ ಪರಿಷತ್ ಮತ್ತು ಇತರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ವಿವಿಧ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ.
ಕಳೆದ 30 ವರ್ಷಗಳಿಂದ ಶ್ರೀ ಗುರುಗಳು ಮುದ್ರಾ, ಮಂತ್ರ, ತಂತ್ರ, ಯಂತ್ರ, ಜ್ಯೋತಿಷ್ಯ, ವಿಷ್ಣು ಸಹಸ್ರನಾಮ ಮತ್ತು ಕರ್ಮ ಸಿದ್ಧಾಂತದ ವೈಜ್ಞಾನಿಕ ವಿಶ್ಲೇಷಣೆ ಮತ್ತು ಇತರ ಅನೇಕ ಆಧ್ಯಾತ್ಮಿಕ ಸಂಬಂಧಿತ ಕ್ಷೇತ್ರಗಳಲ್ಲಿ ವ್ಯಾಪಕ ಸಂಶೋಧನೆ ನಡೆಸುತ್ತಿದ್ದಾರೆ ಮತ್ತು ಅನೇಕ ಪ್ರವಚನಗಳನ್ನು ಕೊಟ್ಟಿದ್ದಾರೆ.
ಮುದ್ರಾ ಚಿಕಿತ್ಸೆಯಲ್ಲಿ ಶ್ರೀ ಗುರುಗಳ ವ್ಯಾಪಕ ಸಂಶೋಧನೆಯು ಮಾನವರ ವಿವಿಧ ಕಾಯಿಲೆಗಳನ್ನು ಗುಣಪಡಿಸುವುದರಿಂದ ಅವರಿಗೆ "ಮುದ್ರಾ ರತ್ನ", "ಮುದ್ರಾ ಬ್ರಹ್ಮ" ಮತ್ತು "ಮುದ್ರಾ ಶಿರೋಮಣಿ" ಎಂಬ ಬಿರುದುಗಳನ್ನು ನೀಡಲಾಗಿದೆ . ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪಾಂಡಿತ್ಯಕ್ಕಾಗಿ "ಜ್ಯೋತಿಷ್ಯ ರತ್ನ" ಮತ್ತು "ಜ್ಯೋತಿಷ್ಯ ಭೂಷಣ" ಮುಂತಾದ ಬಿರುದುಗಳನ್ನು ಗಳಿಸಿದ್ದಾರೆ, 2019 ನೇ ಇಸವಿಯಲ್ಲಿ ಶ್ರೀ ಗುರುಗಳ ಸಮಾಜ ಸೇವೆಯನ್ನು ಗುರುತಿಸಿ "ಇಂಟರ್‌ನ್ಯಾಷನಲ್ ಗ್ಲೋಬಲ್ ಪೀಸ್ ಉನಿವರ್ಸಿಟಿ" ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದ್ದಾರೆ.
ಶ್ರೀ ಗುರುಗಳು ಲಲಿತಕಲೆಗಳಾದ ಭರತನಾಟ್ಯ ಮತ್ತು ಕಥಕ್‌ನಂತಹ ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಬಗ್ಗೆಯೂ ಪ್ರಾವಿಣ್ಯತೆಯನ್ನು ಹೊಂದಿದ್ದಾರೆ, ಶ್ರೀ ಗುರುಗಳು ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದಲ್ಲದೆ, ಭಾರತ ಮತ್ತು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಮುಂದುವರಿಸಿಶಿವರಾತ್ರಿ ಪೂಜೆಯ ದಿವಸ ನಾವು ಕೊಡುವ ಬ್ಯಾಗ್ ಅಥವಾ ಕಿಟ್ ನಲ್ಲಿರುವ 40 ಸಾಮಗ್ರಿಗಳ ಪಟ್ಟಿ,
ಹರಿದ್ರಾ ಗಣಪತಿ , ಜ್ಯೋತಿರ್ಲಿಂಗ , ದೀಪ, ದೀಪಕ್ಕೆ ಬತ್ತಿ ಮತ್ತು ಎಣ್ಣೆ , ಗೆಜ್ಜೆ ವಸ್ತ್ರ , ಜನಿವಾರ , ದೇವರಿಗೆ ಉಡಿಸುವ ವಸ್ತ್ರ , ಭಸ್ಮ , ಅರಿಶಿನ, ಕುಂಕುಮ , ಅಕ್ಷತೆ , ಪಂಚಾಮೃತ ಅಭಿಷೇಕಕ್ಕೆ ಬೇಕಾದ ಸಾಮಗ್ರಿಗಳು , ಐದು ರೀತಿಯ ಹೂವುಗಳು , ಐದು ರೀತಿಯ ಹಣ್ಣುಗಳು , ಆರತಿ ತಟ್ಟೆ , ಪಂಚಪಾತ್ರೆ , ಉದ್ಧರಣೆ , ವೀಳ್ಯದ ಎಲೆ ಅಡಿಕೆ , ಬೆಲ್ಲ ಇತ್ಯಾದಿ ವಸ್ತುಗಳು.